ನಿಮ್ಮ ಮಾತುಕತೆಯನ್ನು ನಾವು ಓದಲಾಗದಂತೆ ತಯಾರಿಸಲಾಗಿದೆ.
ಗೌಪ್ಯತೆ ಎಂಬುದು ನೀವು ಹುಡುಕಿ ಆನ್ ಮಾಡಬೇಕಾದ ಸೆಟ್ಟಿಂಗ್ ಅಲ್ಲ. app ಅನ್ನೇ ಹಾಗೆ ರೂಪಿಸಲಾಗಿದೆ. ನಾವು ಏನು ನೋಡಬಹುದು, ಏನು ನೋಡಲಾಗದು ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇವೆ.
ನಾವು ನೋಡಲಾಗದ್ದು
- ನಿಮ್ಮ ಸಂದೇಶಗಳಲ್ಲಿ ಏನಿದೆ ಎಂಬುದು
- ನಿಮ್ಮ ಫೋಟೋಗಳು ಮತ್ತು ಕಡತಗಳು
- ಕರೆಯಲ್ಲಿ ನೀವು ಏನು ಮಾತಾಡುತ್ತೀರಿ ಎಂಬುದು
- ಉತ್ತರಿಸುವಾಗ ನೀವು ಯಾವ ಸಂದೇಶ ಉಲ್ಲೇಖಿಸಿದಿರಿ ಎಂಬುದು
- ನೀವು ಹೇಗೆ ಪ್ರತಿಕ್ರಿಯಿಸಿದಿರಿ, ಅಥವಾ ನಿಮ್ಮ ಅವತಾರ್ ಹೇಗಿದೆ ಎಂಬುದು
- ನೀವು ಸಂದೇಶ ಯಾವಾಗ ಓದಿದಿರಿ ಎಂಬುದು
- ನಿಮ್ಮ ಸಂಪರ್ಕ ಪಟ್ಟಿ (ನಾವು ಅದನ್ನು ಎಂದೂ ಕೇಳುವುದಿಲ್ಲ)
- ನಿಮ್ಮ ಇರುವಿಕೆಯ ಜಾಗ (ನಾವು ಅದನ್ನು ಎಂದೂ ಕೇಳುವುದಿಲ್ಲ)
ನಮ್ಮ ಸರ್ವರ್ ನೋಡಬಲ್ಲದ್ದು
ಗುಪ್ತಗೊಳಿಸುವಿಕೆ ಒಳಗಿನ ವಿಷಯವನ್ನು ಮರೆಮಾಡುತ್ತದೆ, ಆದರೆ ಹೊರಗಿನ ಲಕೋಟೆಯನ್ನಲ್ಲ. ಸಂದೇಶಗಳನ್ನು ತಲುಪಿಸಲು ಸರ್ವರ್‌ಗೆ ಇವು ತಿಳಿದಿರಲೇಬೇಕು:
- ಯಾರು ಯಾರೊಂದಿಗೆ ಮಾತಾಡುತ್ತಾರೆ, ಮತ್ತು ಯಾವಾಗ
- ಸಂದೇಶ ಅಥವಾ ಕಡತದ ಗಾತ್ರ ಎಷ್ಟು
- ಗುಂಪಿನ ಹೆಸರು ಮತ್ತು ಅದರಲ್ಲಿ ಯಾರಿದ್ದಾರೆ
- ಕರೆ ಜೋಡಿಸಲಾಗುತ್ತಿದೆ ಎಂಬುದು
- ನಿಮ್ಮ ಕೆಲಸಗಳು, ಒಪ್ಪಂದಗಳು ಮತ್ತು ವರದಿಯ ಕರಡುಗಳು. ಇವು ಗುಪ್ತವಾಗಿರುವುದಿಲ್ಲ, ಆದ್ದರಿಂದ ಗೋಪ್ಯ ವಿಷಯಗಳನ್ನು ಇಲ್ಲಿ ಬರೆಯಬೇಡಿ
ನಾವು ಪಾಲಿಸುವ ನಿಯಮಗಳು
ಇವುಗಳಲ್ಲಿ ಪ್ರತಿಯೊಂದನ್ನೂ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೂಲಕ ಖಚಿತಪಡಿಸಲಾಗುತ್ತದೆ. ಹೆಚ್ಚಿನವನ್ನು ಪ್ರತಿ ಬಿಡುಗಡೆಗೂ ಮೊದಲು ಸ್ವಯಂಚಾಲಿತ ಪರೀಕ್ಷೆಗಳ ಮೂಲಕ ತಪಾಸಿಸಲಾಗುತ್ತದೆ.
ಕೀಗಳು ನಿಮ್ಮ ಫೋನ್‌ನಲ್ಲೇ ಇರುತ್ತವೆ
ಗುಪ್ತಗೊಳಿಸುವ ಕೀಗಳನ್ನು ನಿಮ್ಮ ಸಾಧನದಲ್ಲೇ ತಯಾರಿಸಲಾಗುತ್ತದೆ, ನಮಗೆ ಕಳುಹಿಸಲಾಗುವುದಿಲ್ಲ. ಸಾಧನ ಕಳೆದುಹೋದರೆ, ನಿಮ್ಮ ಹಳೆಯ ಸಂದೇಶಗಳನ್ನು ಯಾರೂ ಮರಳಿ ತರಲಾಗದು, ನಾವೂ ಸಹ.
ವಂಚನೆ ಪರೀಕ್ಷೆ ನಿಮ್ಮ ಫೋನ್‌ನಲ್ಲೇ ನಡೆಯುತ್ತದೆ
ನಿಮ್ಮನ್ನು ರಕ್ಷಿಸಲು ನಾವು ನಿಮ್ಮ ಸಂದೇಶಗಳನ್ನು ಓದಬೇಕಾಗಿಲ್ಲ. ಗುಪ್ತಗೊಳಿಸುವ ಮೊದಲು ಮತ್ತು ಬಿಚ್ಚಿದ ನಂತರ, ಪರೀಕ್ಷೆ ನಿಮ್ಮ ಸಾಧನದಲ್ಲೇ ನಡೆಯುತ್ತದೆ.
ಮುಖದ ಮಾಹಿತಿ ಇಲ್ಲ
ನಿಮ್ಮ ಅವತಾರ್ ಎಂಬುದು ಕೆಲವು ಚಿಕ್ಕ ಸಂಖ್ಯೆಗಳಿಂದ ಮಾಡಿದ ಚಿತ್ರ ಮಾತ್ರ. ಸೆಲ್ಫಿ ಇಲ್ಲ, ಮುಖ ಸ್ಕ್ಯಾನ್ ಇಲ್ಲ, ದೇಹದ ಯಾವುದೇ ಗುರುತಿನ ಮಾಹಿತಿ ಇಲ್ಲ. ಭಾರತದ DPDP Act 2023 ಅಡಿಯಲ್ಲಿ ನಾವು ಅದನ್ನು ಸಂಗ್ರಹಿಸುವುದೇ ಇಲ್ಲ.
ಧರ್ಮದ ಅಂಕಣ ಇಲ್ಲ
ನಿಮ್ಮ ಅವತಾರ್‌ನಲ್ಲಿ ದಸ್ತಾರ್ ಅಥವಾ ಬಿಂದಿ ಧರಿಸಿದರೂ, ಯಾವ ದತ್ತಾಂಶ ಸಂಗ್ರಹದಲ್ಲೂ ನಿಮ್ಮ ಧರ್ಮ ದಾಖಲಾಗುವುದಿಲ್ಲ. ನಾವು ಧರ್ಮವನ್ನು ಎಂದಿಗೂ ಸಂಗ್ರಹಿಸುವುದಿಲ್ಲ, ಊಹಿಸುವುದಿಲ್ಲ, ಹೊರಗೆ ಕಳುಹಿಸುವುದಿಲ್ಲ.
ಯಾವ ಟ್ರ್ಯಾಕರ್ ಇಲ್ಲ, ಯಾವ ಜಾಹೀರಾತು ಇಲ್ಲ
app ನಲ್ಲಿ ಅಥವಾ ಈ ವೆಬ್‌ಸೈಟ್‌ನಲ್ಲಿ ಯಾವ ವಿಶ್ಲೇಷಣೆ, ಜಾಹೀರಾತು ಅಥವಾ ಟ್ರ್ಯಾಕಿಂಗ್ ಸ್ಕ್ರಿಪ್ಟ್ ಇಲ್ಲ. ಪ್ರತಿಯೊಂದು ಅಕ್ಷರ ಶೈಲಿ ಮತ್ತು ಕಡತ ನಮ್ಮದೇ ಸರ್ವರ್‌ನಿಂದ ತೆರೆದುಕೊಳ್ಳುತ್ತದೆ.
ಸಂಖ್ಯೆಗಳ ಸಂಗ್ರಹ ಇಲ್ಲ
ಯಾರನ್ನಾದರೂ ಹುಡುಕಬೇಕಾದರೆ ಅವರ ಪೂರ್ಣ mobile ಸಂಖ್ಯೆ ಬೇಕು. ಅಪೂರ್ಣ ಹುಡುಕಾಟಕ್ಕೆ ಯಾವ ಫಲಿತಾಂಶವೂ ಸಿಗುವುದಿಲ್ಲ, ಹಾಗಾಗಿ ಯಾರೂ ಬಳಕೆದಾರರ ಪಟ್ಟಿ ಕಲೆಹಾಕಲು ಸಾಧ್ಯವಿಲ್ಲ.
ಅಳಿಸಿದರೆ ಅಳಿಸಿದಂತೆ
ಮಾಯವಾಗುವ ಸಂದೇಶದ ಅವಧಿ ಮುಗಿದಾಗ, ರಹಸ್ಯವಾಗಿ ಕಳುಹಿಸಿದ ಸಂದೇಶ ಮತ್ತು ಅದರ ಪ್ರತಿಯೊಂದು ಕೀ ಸರ್ವರ್‌ನಿಂದ ತೆಗೆದುಹಾಕಲ್ಪಡುತ್ತದೆ, ಅಡಗಿಸಿ ಇಡಲಾಗುವುದಿಲ್ಲ.
ಗುರುತಿನ ಸಂಖ್ಯೆಗಳನ್ನು ಎಂದಿಗೂ ಸಂಗ್ರಹಿಸುವುದಿಲ್ಲ
ನೀವು ನಿಮ್ಮ ಗುರುತು ಪರಿಶೀಲಿಸಲು ಆಯ್ಕೆ ಮಾಡಿದರೆ, ಆ ಪರಿಶೀಲನೆ ಪರವಾನಗಿ ಪಡೆದ ಪಾಲುದಾರರ ಮೂಲಕ ನಡೆಯುತ್ತದೆ. ನಕಲು ಖಾತೆಗಳನ್ನು ತಡೆಯಲು ನಾವು ಒಂದು ವಿಶೇಷ ಗುರುತಿನ ಗುರುತು ಮಾತ್ರ ಇಟ್ಟುಕೊಳ್ಳುತ್ತೇವೆ.
ಒಂದೇ ಒಂದು ಕುಕಿ, ಅದು ಅನಿವಾರ್ಯ
app ಒಂದು ಸೈನ್-ಇನ್ ಕುಕಿ ಬಳಸುತ್ತದೆ, ಅದು ಗರಿಷ್ಠ 24 ಗಂಟೆ ಉಳಿಯುತ್ತದೆ. ಈ ವೆಬ್‌ಸೈಟ್ ಯಾವ ಕುಕಿಯನ್ನೂ ಬಳಸುವುದಿಲ್ಲ.
ಇನ್ನೂ ಸಿದ್ಧವಾಗದ ಸೌಲಭ್ಯಗಳು
app ನಲ್ಲಿ ಖಾತೆ ಅಳಿಸುವ ಸೌಲಭ್ಯ, ದತ್ತಾಂಶ ರಫ್ತು ಮತ್ತು password ಮರುಪಡೆಯುವಿಕೆ ಪೈಲಟ್ ಹಂತದಲ್ಲಿ ಲಭ್ಯವಿಲ್ಲ. ಅವು ಬರುವವರೆಗೆ, ಸಂಪರ್ಕಿಸಿ ಮೂಲಕ ನಮಗೆ ಬರೆಯಿರಿ, ನಾವು ನಿಮ್ಮ ಖಾತೆಯನ್ನು ಕೈಯಾರೆ ಅಳಿಸುತ್ತೇವೆ. ಪೂರ್ಣ ಕಾನೂನು ವಿವರ ನಮ್ಮ ಗೌಪ್ಯತಾ ನೀತಿಯಲ್ಲಿದೆ.